ಸಚಿವ ಮುರುಗೇಶ್ ನಿರಾಣಿ ಅವರಿಂದ ಹುಲಿಯನ್ನು ದತ್ತು ಪಡೆಯುವ ಮೂಲಕ ವಿಶ್ವ ಹುಲಿ ದಿನಾಚರಣೆ..
ಮೈಸೂರು: ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವರಾದ ಮುರಗೇಶ ನಿರಾಣಿ ರವರ ಮೊಮ್ಮಗ ಸಮರ್ಥ್ ಎಂ ವಿಜಯ ನಿರಾಣಿ ಅವರ ಹೆಸರಿನಲ್ಲಿ ಕರ್ನಾಟಕ ಮೃಗಾಲಯದ ಮಾನ್ಯ ಎಂಬ ಹೆಣ್ಣು ಹುಲಿಯನ್ನು 2 ಲಕ್ಷ ರೂ ದೇಣಿಗೆಯ 1ವರ್ಷದ ಅವಧಿಗೆ
ದತ್ತು ಪಡೆದಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಶಿವಕುಮಾರ ಇಂದು ವಿಶ್ವ ಹುಲಿ ದಿನದಂದು ನಿರಾಣಿ ಕುಟುಂಬದವರು ಹುಲಿಯನ್ನು ದತ್ತು ತಗಲುವ ಮೂಲಕ ಮೃಗಾಲಯದ ಪ್ರಾಣಿಗಳಿಗೆ ಸಹಕಾರವಾಗುತ್ತಿದೆ ಮೊದಲಿಗೆ ಅವರಿಗೆ ನಾನು ಅಭಿನಂದಿಸುತ್ತೇನೆ ನಾನು ಅಧಿಕಾರ ಪಡೆದ ನಂತರ ಸಾರ್ವಜನಿಕರಿಂದ ಮೃಗಾಲಯ ಪ್ರಾಣಿ ಪಕ್ಷಿಗಳ ಸಂಕುಲ ಉಳಿಯಲು ದೇಣಿಗೆ ರೂಪದಲ್ಲಿ ಇಂದು ಸಚಿವರಾದ ಮುರುಗೇಶ್ ನಿರಾಣಿ ರವರು 1ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯ ಪ್ರಾಧಿಕಾರ ಅಭಿನಂದಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ,ನಗರ ಪಾಲಿಕಾ ಸದಸ್ಯರಾದ ಕೆ ಜೆ ರಮೇಶ್ ,ವಿಕ್ರಂ ಅಯ್ಯಂಗಾರ್, ಹಾಗೂ ಮೃಗಾಲಯದ ಅಧಿಕಾರಿಗಳು ಹಾಜರಿದ್ದರು.




















































